Monday, September 24, 2012

ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯು(ಎಸ್.ಜೆ.ಎಸ್.ಅರ್.ವೈ) ಬಿ.ಬಿ.ಎಂ.ಪಿಯಲ್ಲಿ ಈಗ ಉತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿದೆ. ಇದು ಸಿವಿಕ್ ಸಂಸ್ಥೆಯ ಶ್ರಮದ ಫಲ :

ಹಿನ್ನಲೆ :
ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಎಲ್ಲಾ ನಗರ ಪ್ರದೇಶಗಳಲ್ಲಿನ ಬಡತನವನ್ನು ನಿವಾರಿಸಲು  1997 ಡಿಸೆಂಬರ್ ನಲ್ಲಿ ಬಂದಂತಹ ಒಂದು ಉತ್ತಮ ಯೋಜನೆ. ಆದರೆ ಈ ಯೋಜನೆಯ ಅನುಷ್ಠಾನ ಬಿ.ಬಿ.ಎಂ.ಪಿ ಸೇರಿದಂತೆ ಹಲವು ನಗರ ಪ್ರದೇಶಗಳಲ್ಲಿ ತುಂಬಾ ಹಿಂದುಳಿದಿತ್ತು. 2009 ರಲ್ಲಿ ಸಿವಿಕ್ ಸಂಸ್ಥೆಯು ಈ ಯೋಜನೆಯ ಅನುಷ್ಠಾನದ ಬಗ್ಗೆ ಬಿ.ಬಿ.ಎಂ.ಪಿಯಲ್ಲಿ ಅಧ್ಯಯನ ನಡೆಸಿ ಈ ಯೋಜನೆಯ ಉತ್ತಮ ಅನುಷ್ಠಾನಕ್ಕಾಗಿ ಪ್ರಯತ್ನಿಸಿತು. ಅಧ್ಯಯನ ನಡೆಸಿದಾಗ ಈ ಕೆಳಕಂಡ ಸಮಸ್ಯೆಗಳು ಕಂಡುಬಂದವು.

ಸಿವಿಕ್ ಕೈಗೊಂಡ ಅಧ್ಯಯನದಲ್ಲಿ ಕಂಡುಬಂದ ಸಮಸ್ಯೆಗಳು :
1. ಅರಿವಿ(ಜ್ಞಾನ)ನ ಕೊರತೆ: ಬಿ.ಬಿ.ಎಂ.ಪಿಯಲ್ಲಿ ಈ ಯೋಜನೆಯ ಅಸ್ತಿತ್ವದ ಬಗ್ಗೆ ಯಾವುದೇ ರೀತಿಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಮುದಾಯ ಮಟ್ಟದಲ್ಲಿ ಹಮ್ಮಿಕೊಂಡಿರಲಿಲ್ಲ. ಇದರ ಬಗ್ಗೆ ಕನ್ನಡದಲ್ಲಿ ಯಾವುದೇ ಮಾಹಿತಿ ಕೈಪಿಡಿ ಇರಲಿಲ್ಲ.
2. ಸಾಲಕ್ಕೆ ಭಧ್ರತೆ ಕೇಳುತ್ತಿದ್ದ ಬ್ಯಾಂಕ್ ಅಧಿಕಾರಿಗಳು: ಈ ಯೋಜನೆಯಡಿಯಲ್ಲಿ ಸ್ವ ಉದ್ಯೋಗವನ್ನು ಕೈಗೊಳ್ಳಲು ಗರಿಷ್ಠ 2 ಲಕ್ಷ ರೂ. ವನ್ನು (ಸಾಲ ಮತ್ತು ಸಹಾಯಧನ ಸೇರಿ) ವೈಯಕ್ತಿಕವಾಗಿ ಪಡೆಯುವ ಅವಕಾಶವಿದೆ. ಆದರೆ ಮಾರ್ಗಸೂಚಿಯಲ್ಲಿ ಈ ಸಾಲಕ್ಕೆ ಯಾವುದೇ ರೀತಿಯ ಭದ್ತೆಯನ್ನು ನೀಡುವಂತಿಲ್ಲ ಹಾಗೂ ಭದ್ರತೆಯನ್ನು ಕೇಳುವಂತಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ. ಆದರೂ ಶೇ.80 ರಷ್ಟು ಬ್ಯಾಂಕಿನ ಅಧಿಕಾರಿಗಳು ಸಾಲಕ್ಕೆ ಭದ್ರತೆಯನ್ನು ಕೇಳುತ್ತಿದ್ದರು.
3. ಅರ್ಜಿಯನ್ನು ವಿಲೇವಾರಿ ಮಾಡಲು ಸಮಯ ನಿಗದಿ ಇರಲಿಲ್ಲ: ಅರ್ಜಿ ಹಾಕಿ 1 ವರ್ಷವಾದರೂ ಈ ಯೋಜನೆಯ ಸೌಲಭ್ಯ ಸಿಗುತ್ತಿರಲಿಲ್ಲ ಮತ್ತು ಆ ಅರ್ಜಿ ಯಾವ ಹಂತದಲ್ಲಿದೆ ಎಂಬುದರ ಮಾಹಿತಿಯೂ ಯಾರೂ ನೀಡುತ್ತಿರಲಿಲ್ಲ. ಬ್ಯಾಂಕು ಮತ್ತು ಇಲಾಖಾ ಅಧಿಕಾರಿಗಳು ಸರಿಯಾಗಿ ಸ್ಪಂಧಿಸುತ್ತಿರಲಿಲ್ಲ.
4.ಈ ಯೋಜನೆಯ ಮೇಲುಸ್ತುವಾರಿಗಾಗಿ ಸಮುದಾಯ ಮಟ್ಟದಲ್ಲಿ ಸಿ.ಡಿ.ಎಸ್(ಸಮುದಾಯ ಅಭಿವೃದ್ಧಿ ಸಂಘ ರಚನೆಯಾಗಿದ್ದು, ಇದು ಪ್ರತಿ ತಿಂಗಳೂ ಸಭೆ ಸೇರಬೇಕು. ಆದರೆ ಪ್ರತಿ ತಿಂಗಳೂ ಬಹಳಷ್ಟು ಬಿ.ಬಿ.ಎಂ.ಪಿ ವಲಯಗಳಲ್ಲಿ ಸಭೆ ಸೇರುತ್ತಿರಲಿಲ್ಲ.
5. ಈ ಸಿ.ಡಿ.ಎಸ್. ಸಭೆಗಾಗಿ 1000 ರೂ. ಇದ್ದು, ಸಭೆ ನಡೆದರೂ ಈ ಹಣವನ್ನು ಖರ್ಚು ಮಾಡುತ್ತಿರಲಿಲ್ಲ.
6. ಈ ಸಮಸ್ಯೆಗಳ ಜೊತೆಗೆ ಹಲವಾರು ಸಮಸ್ಯೆಗಳನ್ನು  (ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಅನ್ನು ಸಂಪರ್ಕಿಸಿ-
http://civiconsjsry.blogspot.in/2011/12/04-03-11-10-30-2.html ಸಮುದಾಯದ ಜನರು ಎದುರಿಸುತ್ತಿದ್ದು, ಈ ಸಮಸ್ಯೆಗಳಿಂದಾಗಿ ಎಸ್.ಜೆ.ಎಸ್.ಆರ್.ವೈ ಯೋಜನೆಯು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿರಲಿಲ್ಲ.


ನಗರ ಮಟ್ಟದಲ್ಲಿ ಸಿವಿಕ್ ಬೆಂಗಳೂರು ಸಂಸ್ಥೆಯು ಕಾರ್ಯ ವಿರ್ವಹಿಸಿದ ಮೇಲೆ ಆದ ಯಶಸ್ವೀ ಬದಲಾವಣೆಗಳು:
1. ಬಿ.ಬಿ.ಎಂ.ಪಿಯ 7 ವಲಯಗಳಲ್ಲಿ ಸಮುದಾಯದ ಮಟ್ಟದಲ್ಲಿ ಅಧಿಕಾರಿಗಳ ಸಹಯೋಗದೊಂದಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
2. ಈ ಯೋಜನೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಲಯ ಜಂಟಿ ಆಯುಕ್ತರ ಅಧ್ಯಕ್ಷತೆದಲ್ಲಿ ಕುಂದುಕೊರತೆಗಳ ಅಹವಾಲು ಸಭೆಯನ್ನು 7 ಬಿ.ಬಿ.ಎಂ.ಪಿ ವಲಯಗಳಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಭೆಯಲ್ಲಿ ಬಂದ ಜಂಟಿ ಆಯುಕ್ತರು ಜನರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ.
3. ಕನ್ನಡದಲ್ಲಿ ಮಾಹಿತಿ ಕೈಪಿಡಿ ಇಲ್ಲದಿರುವ ಬಗ್ಗೆ ಪೌರಾಡಳಿತ ನಿರ್ದೇಶನಾಲಯ ಮತ್ತು ಬಿ.ಬಿ.ಎಂ.ಪಿಯ ಗಮನಕ್ಕೆ ತಂದ ನಂತರ ಪೌರಾಡಳಿತ ನಿರ್ದೇಶನಾಲಯವು ಕರ್ನಾಟಕದ 205 ನಗರ ಪ್ರದೇಶಗಳಿಗೆಲ್ಲಾ ಎಷ್ಟು ಪುಸ್ತಕ ಬೇಕಾಗಿದೆ ಎಂದು ಪತ್ರಗಳನ್ನು ಬರೆದು ನಂತರ ಪುಸ್ತಕವನ್ನು ಮುದ್ರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ.
4.  ಬ್ಯಾಂಕುಗಳ ಸಮಸ್ಯೆಗಳನ್ನು ಬೆಂಗಳೂರು ನಗರದ ಲೀಡ್ ಬ್ಯಾಂಕ್ ಮ್ಯಾನೇಜರ್ ಮತ್ತು ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿಯ ಮುಖ್ಯಸ್ಥರ ಗಮನಕ್ಕೆ ತಂದ ನಂತರ ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿಯು ಎಲ್ಲಾ ಬ್ಯಾಂಕುಗಳಿಗೆ ಶೀಘ್ರ ಅರ್ಜಿಗಳನ್ನು ವಿಲೇವಾರಿ ಮಾಡಲು ಸಮಯ ನಿಗದಿ ಮಾಡಿ ಸುತ್ತೋಲೆಯನ್ನು ಕಳುಹಿಸಿದೆ ಮತ್ತು ಎಲ್ಲಾ ಬ್ಯಾಂಕುಗಳಿಗೆ ಸಾಲಕ್ಕೆ ಭದ್ರತೆಯನ್ನು ಕೇಳದಿರುವ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.(ಇದರ ಬಗ್ಗೆ ಇರುವ ಆದೇಶದ ಪ್ರತಿಯನ್ನು ಈ ಕೆಳಗೆ ನೀಡಲಾಗಿದೆ).
5.  ಬಿ.ಬಿ.ಎಂ.ಪಿ 6 ವಲಯಗಳಲ್ಲಿ ಪ್ರತಿ ತಿಂಗಳೂ ಸಿ.ಡಿ.ಎಸ್ ಸಭೆಗಳು ನಡೆಯುತ್ತಿವೆ.
6. ಎಲ್ಲಾ ವಲಯಗಳಲ್ಲಿ ಈಗ ಉತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿದೆ. ಬಿಡುಗಡೆಯಾದ ಹಣವು ಸಹ ವರ್ಷದಿಂದ ವರ್ಷಕ್ಕೆ  ಉತ್ತಮ ಪ್ರಗತಿಯಿಂದ ಖಚರ್ಾಗುತ್ತಿದೆ.
ಉದಾ:
ವರ್ಷ             ಬಿಡುಗಡೆಯಾದ ಹಣ           ಖರ್ಚಾದ ಹಣ          ಶೇಕಡಾವಾರು   
2009-10            669 ಲಕ್ಷ                            92.8 ಲಕ್ಷ                          14%   
2010-11            683 ಲಕ್ಷ                              291 ಲಕ್ಷ                            44%   
2011-12           659 ಲಕ್ಷ                              592 ಲಕ್ಷ                           90%    


ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿ(ಎಸ್.ಎಲ್.ಬಿ.ಸಿ) ಯ ಆದೇಶದ ಪ್ರತಿ

 

No comments:

Post a Comment